ಪ್ರಾದೇಶಿಕ ಕಥನ ಪರಂಪರೆಗೆ ?? ದರದೇ ಆದ ಮಹತ್ವವಿದೆ. ಆಯಾ ಪ್ರದೇಶದ ಸಾಂಸ್ಕೃತಿಕ, ಪರಂಪರಾತ್ಮಕ ಆಗುಹೋಗುಗಳನ್ನು ಸವಿವರವಾಗಿ ದಾಖಲಿಸುವ ಕಥನ ಶೈಲಿ ಆಯಾಯ ಪರಿಸರದಲ್ಲಿ ಬೆಳೆದು ಬಂದ ಲೇಖಕರ ಸಂಶೋಧನಾತ್ಮಕ ?? ಭ್ಯಾಸವನ್ನು ಆದರಿಸಿದೆ. ?? ವಿಭಾಜಿತ ದಕ್ಷಿಣಕನ್ನಡ ತುಳುನಾಡಿನ ?? ನೇಕ ಸಾಂಸ್ಕೃತಿಕ ಮತ್ತು ಸಾಹಿತ್ಯಕ ರೋಚಕತೆಯನ್ನು ಪಡೆದಿರುವ ಪ್ರದೇಶ. ಇಲ್ಲಿಯ ಪ್ರತೀಯೊಂದು ಸಂಸ್ಕೃತಿಗೂ ?? ದರದೇ ಆದ ವೈಶಿಷ್ಟ್ಯತೆಯಿದೆ. ಈ ವೈಶಿಷ್ಟ್ಯವೇ ಇಂದಿಗೂ ಈ ಪ್ರದೇಶದ ಜನರ ನಂಬಿಕೆ, ಆಶಾಭಾವನೆ, ಭಯ ಭಕ್ತಿಯ ಮತ್ತು ಮುಂದುವರೆಸಿಕೊಂಡು ಬಂದಿರುವ ಜೀವನ ಕ್ರಮವನ್ನು ಒಂದು ಸಿದ್ಧ ಮಾದರಿಯಾಗಿ ರೂಪಿಸಿಕೊಂಡು ಬಂದಿರುವುದು ಆಶ್ಚರ್ಯವೇನಲ್ಲ.


‘ತಿಲ್ಲಾನ’ ಕಾದಂಬರಿಯ ಹೆಸರೇ ಆಕರ್ಷಕ ಮತ್ತು ಇಂಪು. ಪ್ರಭಾಕರ ನೀರ್ಮಾರ್ಗ ?? ವರ ನಾಲ್ಕನೆಯ ಕೃತಿಯಾದ ಇದು ದಕ್ಷಿಣಕನ್ನಡದ ಸಾಂಸ್ಕೃತಿಕ ಪರಂಪರೆಯೊಂದಿಗಿನ ತಲ್ಲಣವನ್ನು ಮತ್ತು ಮಾರ್ಪಾಡಾಗುತ್ತಿರುವ ?? ನಾದಿಕಾಲದ ಆಚರಣೆಗಳನ್ನು ?? ಳಿವಿನಂಚಿಗೆ ಸಾಗಿಸುತ್ತೇವೇನೋ ?? ನ್ನುವ ಆತಂಕದೊಂದಿಗೆ ಬರೆದಿರುವಂತೆ ಮಾತ್ರವಲ್ಲ, ಸಮಾಜದಲ್ಲಿಯ ?? ಂಧಾನುಕರಣೆಯ ‘ವಿಶ್ವವ್ಯಾಪಿ ಪರಿವರ್ತನಾ ಪಿಡುಗು’ ಹಬ್ಬುತ್ತಲೇ ಎಲ್ಲವನ್ನೂ ಸ್ವ್ಯಾಪ್ ಮಾಡಿಕೊಂಡು ಬಿಡುತ್ತದೆಯೆನ್ನುವುದಕ್ಕೆ ಉದಾಹರಣೆಯಂತೆ ಕಾಣುತ್ತದೆ.


ಈ ಕೃತಿಯಲ್ಲಿ ದಕ್ಷಿಣಕನ್ನಡ ಜಿಲ್ಲೆಯ ?? ಪೂರ್ವ ಸಂಸ್ಕೃತಿಯಾದ ಭೂತಾರಾಧನೆಯ ಮತ್ತು ಭೂತ ಕಟ್ಟುವವರ ಬಗ್ಗೆ ಸವಿವರವಾದ ವಿಷಯಗಳನ್ನು ದಾಖಲಿಸಲಾಗಿದೆ. ಭೂತಾರಾಧನೆಯೆ ಬದುಕಿನ ?? ವಿಭಾಜ್ಯ ?? ಂಗವಾಗಿ ಇಂದಿಗೂ ಆ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿರುವ ಎಷ್ಟೋ ಕುಟುಂಬಗಳ ಆಂತರಿಕ ತುಮುಲ, ಒಳಗೊಳಗೆ ನಡೆಯುವ ರಾಜಕೀಯ, ವಿಶ್ವವ್ಯಾಪಿಗೆ ತೆರೆದುಕೊಳ್ಳುವಾಗಿನ ಭಯ, ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಲಾರದ ?? ಸಹಾಯಕತೆ ಇವೆಲ್ಲವನ್ನೂ ಕಾದಂಬರಿ ಬಹಳ ಮಾರ್ಮಿಕವಾಗಿ ತೆರೆದಿಡುತ್ತದೆ. ಸಂಸ್ಕೃತಿಯ ಸೊಗಡು, ಪಾಡ್ದನ, ?? ರದಾಲ, ನರ್ತನಗಳ ಮೂಲಕ ಸಮಷ್ಟಿ ಕಲೆಯೆನಿಸಿದ ‘ಭೂತಾರಾಧನೆ’ ಇಂದಿಗೂ ಜನರ ದೈನಂದಿನ ಬದುಕಿನಲ್ಲಿ ಹಾಸುಹೊಕ್ಕಾಗಿ ನೆಲೆಸಿದೆಯೆಂದರೆ ?? ತಿಶಯೋಕ್ತಿಯಲ್ಲ. ಈ ರೀತಿಯ ಒಂದು ಪ್ರದೇಶದ ಕಲೆಯನ್ನು ಕಾದಂಬರಿಯಾಗಿಸುವಾಗ ?? ನೇಕ ವಾಸ್ತವ ಸಂಗತಿಗಳನ್ನು ಕಲೆಹಾಕಬೇಕಾಗಿರುವ ?? ವಶ್ಯಕತೆ ಲೇಖಕನಿಗಿದೆ. ಈ ಕಾದಂಬರಿಯಲ್ಲಿ ಆ ರೀತಿಯ ಸಂಶೋಧನಾತ್ಮಕ ರಚನೆ ಎದ್ದು ಕಾಣುತ್ತದೆ.


ಜಾಗತೀಕರಣದ ರಣಕಹಳೆ ಹಳ್ಳಿಯನ್ನೂ ಕಬಳಿಸಿ, ?? ಲ್ಲಿಯ ಸಂಸ್ಕೃತಿಯನ್ನು ವಿನಾಶದ ?? ಂಚಿಗೆ ?? ಥವಾ ಆಧುನಿಕತೆಗೆ ಪರಿವರ್ತಿಸಿ ಮೂಲ ಧಾತುವನ್ನೇ ಬದಲಿಸುವುದು ಸರ್ವೇಸಾಮಾನ್ಯ. ?? ಂತಹ ಒಂದು ಕುಸಂಸ್ಕೃತಿಗೆ ಬಲಿಯಾಗುವ ತುಳುನಾಡಿನ ಭೂತಾರಾಧನೆಯನ್ನು ಆಧಾರವಾಗಿಟ್ಟುಕೊಂಡು, ಭೂತ ಕಟ್ಟುವವರ ಜೀವನವನ್ನು ತೆರೆದಿಡುವ ಕಾದಂಬರಿಯ ಮುಖ್ಯ ವಾಹಿನಿಯಲ್ಲಿ ಹಿರಿಯನಂತಹ ಆದರ್ಶ ವ್ಯಕ್ತಿಯೊಬ್ಬ ಕಾಣಿಸಿಕೊಳ್ಳುತ್ತಾನೆ. ಒಳಗೊಳಗೆ ನಡೆಯುವ ರಾಜಕೀಯದಂತಹ ದೊಂಬರಾಟದಲ್ಲಿ ಗುರುವ ಮತ್ತು ಜೋಯಿಸರಂತಹ ವ್ಯಕ್ತಿಗಳೇ ಸಾಂಸ್ಕೃತಿಕ ನೆಲೆಯನ್ನು ಗುರಿತಪ್ಪಿಸುವ ಕಾರ್ಯಕ್ಕೂ ಇಳಿಯುತ್ತಾರೆ. ಒಟ್ಟಿನಲ್ಲಿ ತನಗೆ ಪರಂಪರಾಗತವಾಗಿ ಬಂದಿರುವ ಭೂತಕಟ್ಟುವ ಕಾಯಕವನ್ನು ತನ್ನ ಮುಂದಿನ ಪೀಳಿಗೆ ಮುಂದುವರೆಸಿಕೊಂಡು ಹೋಗಬೇಕೆನ್ನುವುದು ಹಿರಿಯನಂತಹ ವ್ಯಕ್ತಿಯ ಆಸೆ. ಆದರೆ ಆಧುನಿಕತೆಗೆ ತಕ್ಕಂತೆ ಜೀವನ ಶೈಲಿಯನ್ನು ಒಪ್ಪಿಕೊಳ್ಳುವಾಗ ಆಗುವ ಬದಲಾವಣೆಗಳನ್ನು ಸ್ವೀಕರಿಸುತ್ತಾ ಸಮಸ್ಯೆಗಳತ್ತ ಮುಖ ಮಾಡುವುದು ಇಲ್ಲಿಯ ಮುಖ್ಯ ತಲ್ಲಣ. ಮಕ್ಕಳಿಬ್ಬರೂ ಪೇಟೆಯ ಬದುಕನ್ನು ನೆಚ್ಚಿಕೊಂಡು ಹಿರಿಯನ ಆಸೆಗಳಿಗೆ ತಣ್ಣೀರೆರೆಚಿ ?? ಲ್ಲೂ ತಮ್ಮನ್ನು ಗುರುತಿಸಿಕೊಳ್ಳದೆ ಹೋಗುವುದು ?? ಡ್ಡ ದಾರಿ ಹಿಡಿದವರಿಗೆ ತಕ್ಕುದಾದ ಶಾಸ್ತಿಯೆನ್ನುವಂತೆ ಕಾಣುತ್ತದೆ. ಇತ್ತ ಮಗಳನ್ನು ಕೂಡ ವಿದ್ಯಾವಂತಳನ್ನಾಗಿಸಿದ ಹಿರಿಯ ?? ವನ ವಿರೋಧವಾಗಿ ?? ವಳು ಬೇರೆ ಜಾತಿಯವನೊಬ್ಬನನ್ನು ಮದುವೆಯಾಗುತ್ತೇನೆನ್ನುವುದು ಮತ್ತೊಂದು ಆಘಾತಕಾರಿ ಬೆಳವಣಿಗೆಯಾಗಿ ತೋರಿ ?? ವನು ವಿರೋಧ ವ್ಯಕ್ತಪಡಿಸುತ್ತಾನೆ. ತನ್ನ ವೃತ್ತಿಯನ್ನು ಮುಂದುವರೆಸಿಕೊಂಡು ಹೋಗಲು ?? ಂಗರನೆನ್ನುವ ಒಬ್ಬ ತನ್ನದೇ ಜಾತಿಯ ಹುಡುಗನನ್ನು ಕರೆಸಿಕೊಂಡು ತನ್ನ ವೃತ್ತಿಯ ಸಮಸ್ತವನ್ನು ?? ವನಿಗೆ ಧಾರೆಯೆರೆಯುತ್ತಾನೆ. ಹಾಗೆಯೇ ಮಗಳನ್ನು ?? ವನಿಗೆ ಕೊಟ್ಟು ತನ್ನ ಪರಂಪರೆಯೊಂದನ್ನು ?? ಳಿಯನಾಗುವವನ ಮೂಲಕ ಮುಂದುವರೆಸಿಕೊಂಡು ಹೋಗಲು ಬಯಸುತ್ತಾನೆ. ಆದರೆ ಮಗಳು ಕಲಿತು ಪ್ರೀತಿಯೆನ್ನುವ ಕೂಪಕ್ಕೆ ಬಿದ್ದಿರುತ್ತಾಳೆ. ಕೊನೆಗೂ ಹಿರಿಯನ ಆಸೆಗಳು ಕೈಗೂಡುವುದೇ ಇಲ್ಲ. ಇದು ಗಟ್ಟಿ ಕಥಾಹಂದರವಾದರೆ ಕೆಲವೊಂದು ಕಡೆ ಘಟನೆಗಳು, ವಿಷಯಗಳು ಪುನರಾವರ್ತನೆಯಾಗಿರುವುದು ಓದುಗನನ್ನು ತಾಳ್ಮೆ ತಪ್ಪಿಸುತ್ತವೆ. ಕೆಲವೊಮ್ಮೆ ಪುಟಭರ್ತಿಗಾಗಿ ಬರೆದವೇನೋ ?? ನ್ನುವ ಸಂಗತಿಗಳು ಇವೆ.


?? ರ್ಧದವರೆಗೂ ಕಾದಂಬರಿ ಆಸಕ್ತಿಯಿಂದ ಓದಿಸಿಕೊಂಡು ಹೋಗುವುದಲ್ಲದೆ ಮಾಹಿತಿಪೂರ್ಣವಾಗಿದೆ. ಆದರೆ ಬಳಿಕ ಇಲ್ಲಿ ಕೆಲವೊಂದು ವ್ಯತಿರೀಕ್ತಗಳು ಕಾದಂಬರಿಯನ್ನು ಸ್ವೀಕರಿಸುವಲ್ಲಿ ತೊಡಕಾಗಿದೆ. ಉದಾಹರಣೆಗೆ ಹಿರಿಯನ ಮಗಳು ಚೋಮಿಲಿ, ಪೇಟೆ ಹೈದ ಕೃಷ್ಣ ಆಲಿಯಾಸ್ ಕಿಟ್ಟಿಯ ಕಣ್ಣಿಗೆ ಬೀಳುತ್ತಲೇ ಶ್ಯಾಮಿಲಿಯಾಗುವುದು ಒಂದು ರೀತಿಯ ?? ಸಂಗತವೆನಿಸುತ್ತದೆ. ಚೋಮಿಲಿಯೆನ್ನುವ ಹೆಸರೇ ಇದ್ದಿದ್ದರೆ ಕೃಷ್ಣನಿಗೆ ಪ್ರೀತಿ ಉಂಟಾಗುತ್ತಿರಲಿಲ್ಲವೇನೋ! ಚೋಮಿಲಿಯನ್ನು ಒಪ್ಪಿಕೊಂಡ ಓದುಗನಿಗೆ ಇದೊಂದು ಕೃತಕ ಬೆಳವಣಿಗೆ ?? ನಿಸದಿರದು. ಇನ್ನು ಎರಡನೆಯದಾಗಿ ಕೆಲವೊಂದು ಪಾತ್ರಗಳು ಧುತ್ತನೆ ಪ್ರತ್ಯಕ್ಷವಾಗಿ ?? ನಗತ್ಯ ?? ವುಗಳ ಬಗ್ಗೆ ಕಥೆಯಿಂದ ಹೊರಗೆ ಬೆಳವಣಿಗೆಯನ್ನು ಪಡೆದು ಕಾದಂಬರಿಯ ಓದಿಗೆ ?? ಡ್ಡಿಯೆನಿಸುತ್ತವೆ. ಇಲ್ಲೂ ಲೇಖಕರು ?? ನಗತ್ಯ ವಿಚಾರಗಳನ್ನು ಆ ಪಾತ್ರಗಳ ಮೂಲಕ ಓದಿಸುತ್ತಾರೆಂದು ಓದುಗನಿಗೆ ?? ನಿಸುತ್ತದೆ. ಉದಾಹರಣೆಗೆ ಕೃಷ್ಣನ ಪಾತ್ರ. ಆತ ಪೋಲಿಯಾಗಿದ್ದು ತನ್ನ ಶ್ರೀಮಂತಿಕೆಯಿಂದಲೇ ವಿದ್ಯೆ ಗಳಿಸಿಕೊಂಡವನು. ಚೋಮಿಲಿ (ಶ್ಯಾಮಿಲಿ)ಯನ್ನು ನೋಡುತ್ತಲೇ ?? ವನು ?? ವಳನ್ನು ?? ಪಾರ್ಥಮಾಡಿಕೊಂಡು ಸುಖ ಪಡಬೇಕೆಂದುಕೊಂಡವನು. ಆದರೆ ?? ನಿರೀಕ್ಷಿತವೆನ್ನುವಂತೆ ?? ವಳನ್ನು ಮದುವೆಯಾಗುವ ನಿರ್ಧಾರವನ್ನು ತೆಗೆದುಕೊಳ್ಳುವುದು ಕೂಡ ಕಥೆ ಜಾಳುಜಾಳಾದಂತೆ ಭಾಸವಾಗುತ್ತದೆ.


ಇಂತಹ ಆಭಾಸಗಳ ನಡುವೆಯೂ ‘ತಿಲ್ಲಾನ’ ಕಾದಂಬರಿ ಪ್ರಾದೇಶಿಕ ಸೊಗಡನ್ನು ನಿರೂಪಿಸುತ್ತಾ ಬೆಳವಣಿಗೆ ಪಡೆಯುವುದು ಒಂದು ರೀತಿಯಲ್ಲಿ ಒಂದು ಪ್ರದೇಶದ ಸಾಂಸ್ಕೃತಿಕ ಚಟುವಟಿಕೆಯ ಬಗ್ಗೆ ಮಾಹಿತಿ ಒದಗಿಸಿದಂತೆ ಮತ್ತು ?? ಲ್ಲಿಯ ಸೊಬಗನ್ನು ತಿಳಿಸಿಕೊಡುವಂತೆ ಕಾಣಿಸುತ್ತದೆ. ಒಂದು ಪ್ರಾದೇಶಿಕ ವಿಷಯಗಳನ್ನು ತಿಳಿದುಕೊಳ್ಳುವುದಕ್ಕಾದರೂ ಇಂತಹ ಕೃತಿಗಳನ್ನು ಓದಲೇಬೇಕು.