‘ಬೆಟ್ಟದ ಜೀವ’ ಕಾದಂಬರಿ ಮೇಲ್ನೋಟಕ್ಕೆ ವ್ಯಕ್ತಿ ಚಿತ್ರಣದಂತೆ ಕಂಡರೂ, ಇಲ್ಲಿ ಶ್ರಮಜೀವಿಯೊಬ್ಬನ ಬದುಕು ಮತ್ತು ಬದುಕಿನಲ್ಲಿ ತಮ್ಮ ಕರುಳ ಬಳ್ಳಿಗಳನ್ನು ಕಳೆದುಕೊಂಡಿರುವ ಜೀವಿಗಳ ಸೂಕ್ಷ್ಮ ಸಂವೇದನೆಯಿದೆ. ಆ ಸಂವೇದನೆಯಲ್ಲೂ ಬತ್ತದ ಉತ್ಸಾಹದ ಜೊತೆಗೆ ಪರೋಪಕಾರದ ಉದಾತ್ತ ಗುಣವನ್ನು ಬೆಳೆಸಿಕೊಂಡು ಬದುಕುವ ವ್ಯಕ್ತಿಯ ಬದುಕಿನ ಸ್ತರಗಳನ್ನು ಈ ಕಾದಂಬರಿಯು ಚಿತ್ರಿಸುತ್ತದೆ. ಏಕವ್ಯಕ್ತಿ ಕೇಂದ್ರಿಕೃತ ಮತ್ತು ಒಂದೇ ಕೋನದಲ್ಲಿ ಕಥೆ ಸಾಗುತ್ತಾದರು, ಇಂಗ್ಲಿಷ್ ವ್ಯಾಮೋಹಕ್ಕೆ ಬಲಿಯಾದ ಮಗ ಮನೆಯಿಂದ ದೂರವಿದ್ದು ಮತ್ತೆ ಹಿಂತಿರುಗುವನೊ, ಇಲ್ಲವೊ? ?? ನ್ನುವ ಕುತೂಹಲ ಹುಟ್ಟಿಸುತ್ತಾ ಮುಂದುವರಿಯುವುದು ಕೂಡ ಈ ಕಾದಂಬರಿಯ ಕೇಂದ್ರವಾಗಿದೆ. ಗೋಪಾಲಯ್ಯ, ಶಂಕರಿ, ಶಿವರಾಮ, ದೇರಣ್ಣಗೌಡ, ನಾರಾಯಣ, ಲಕ್ಷ್ಮೀ, ಬಟ್ಯಗಳಂತಹ ಕೆಲವೇ ಪಾತ್ರಗಳ ಮೂಲಕ ನೇರಮಾತುಗಳಿಂದ ?? ರ್ಥಪೂರ್ಣವಾದ ಜೀವನಾನುಭವಳನ್ನು ಮಂಡಿಸುವುದು ಈ ಕಾದಂಬರಿಯ ಪ್ರಮುಖ ಲಕ್ಷಣ."
ಕಥೆಯ ಮುಖ್ಯವಾಹಿನಿ ಬದುಕಿದ್ದೂ ಹೆತ್ತವರಿಂದ ದೂರವಿರುವ ಮಗ ಶಹರಿನ ವ್ಯಾಮೋಹಕ್ಕೆ ಬಲಿಯಾಗಿ, ಮನೆಗೆ ಹಿಂದಿರುಗದೆ ಇರುವುದಾದರೂ, ಇಲ್ಲಿ ಬೆಟ್ಟದ ಮೇಲೆ ನಿರೀಕ್ಷೆಗಳನ್ನು ಹೊತ್ತು ನಿಂತ ಮಹಾತ್ವಕಾಂಕ್ಷಿಯೊಬ್ಬನ ಕಷ್ಟ ಕಾರ್ಪಣ್ಯಗಳನ್ನು, ತಲ್ಲಣಗಳನ್ನು ಗೋಪಾಲಯ್ಯನ ಪಾತ್ರದ ಮೂಲಕ ಬಿಚ್ಚಿಡುತ್ತದೆ. ಮಗನನ್ನು ಕಳೆದುಕೊಳ್ಳುವ ಆತಂಕ, ಭಯವಿದ್ದರೂ ?? ದನ್ನು ತೋರಿಸಿಕೊಳ್ಳದೆ ನಿರಂತರವಾಗಿ ಬದುಕಿನಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ?? ವರು ಮಾತ್ರ ಕೈ ಹಿಡಿದ ಶಂಕರಿಯಲ್ಲಿ ಮಗನ ಬಗೆಗಿರುವ ?? ದಮ್ಯ ಆಸೆಗಳನ್ನು ಉಪೇಕ್ಷಿಸಲಾರದೆ ಒಳಗೊಳಗೆ ಬೇಯುವುದು, ಬದುಕಿನ ಕೊನೆ ಘಳಿಗೆಯ ಹೆದರಿಕೆಯಿಂದಲ್ಲ. ಬದಲಾಗಿ ?? ಲ್ಲಿ ಆತ್ಮೀಯತೆ, ಹೊಂದಾಣಿಕೆ, ಭರವಸೆಗಳ ಮಹಾಪೂರವೆ ತುಂಬಿದೆ; ?? ವರನ್ನು ಸಾಂತ್ವನಿಸುವ ಹಿರಿಮೆಯಿದೆ.
‘ಲಕ್ಷ್ಮೀ ದನವನ್ನು ಹುಲಿ ಹಿಡಿದ ಹಾಗೆ ಯಾವುದೋ ಹೆಣ್ಣು ಹುಲಿ ಮಗನನ್ನು ಹಿಡಿದಿದೆ’ ಯೆನ್ನುವ ಉಪಮೆಯು ಮಗ ಶಂಭುವಿನಿಂದ ದೂರವಿದ್ದರೂ ?? ವನ ಬಗ್ಗೆ ನಡೆದಿರಬಹುದಾದ್ದನ್ನು ?? ವರು ಊಹಿಸುವಂತೆ ಮಾಡುತ್ತದೆ. ?? ದಲ್ಲದೆ ನಾರಾಯಣನ ಮಡದಿ ಶಿವರಾಮನ ಜೊತೆಗೆ ಶಂಭು ?? ವಳ ಜೊತೆಗೆ ನಡೆದುಕೊಂಡ ರೀತಿಯಿಂದ ?? ವನು ನಿಗೂಢವಾಗಿರುವುದಕ್ಕೆ ಮತ್ತು ?? ವನ ಗುಣಗಳನ್ನು ತಿಳಿಸುವುದಕ್ಕೆ ಸರಿಯಾದ ಸಾಕ್ಷಿಯಾಗಿ ನಿಲ್ಲುತ್ತದೆ. ಲಕ್ಷ್ಮೀಗೆ ?? ವನು ದೂರವಿರುವುದಕ್ಕೆ ಒಂದು ರೀತಿಯಲ್ಲಿ ತಾನು ಕಾರಣಳೆನ್ನುವ ?? ಗಾಧ ?? ಪರಾದಿ ಭಾವನೆಯಿದ್ದರೂ ?? ದು ?? ವಳ ಪರಿಸ್ಥಿತಿಯನ್ನು ಮೀರಿರುವಂತದ್ದು.
ಬೆಟ್ಟದ ಮೇಲೆಯೆ ತನ್ನ ಹಿರಿಯರ ಆಸ್ತಿಯನ್ನು ?? ನುಭೋಗಿಸುತ್ತಾ, ಕಾಟುಮೂಲೆ ಮತ್ತು ನೀರ್ಕಟ್ಟೆಯಂತಹ ಪ್ರಯೋಜನಕ್ಕೆ ಬಾರದ ಬಂಡೆ ಕಲ್ಲುಗಳ ನೀರಿನ ಸೆಲೆಯಿರುವ ಪ್ರದೇಶಗಳನ್ನು ಕೃಷಿ ಯೋಗ್ಯ ಭೂಮಿಯನ್ನಾಗಿಸುವ ಗೋಪಾಲಯ್ಯನ ಛಲಗಳೇನಿದ್ದರೂ ಕೊನೆಗೂ ಉಳಿಯುವುದು ?? ತೃಪ್ತಿ ಮತ್ತು ಶಂಭುನಿಲ್ಲದ ನೋವು. ಶಂಕರಿಯವರು ಕೂಡ ಎಷ್ಟೇ ಲವಲವಿಕೆಯಿಂದಿದ್ದರೂ ?? ವರನ್ನು ಹೈರಾಣಾಗಿಸುವುದು ತಮ್ಮ ತೊಡೆಗಳಲ್ಲಿಯೆ ತಲೆಯಿಟ್ಟು ಇಹಲೋಕ ತ್ಯಜಿಸಿದ ಮಗಳು ವಾಗ್ದೇವಿಯ ದಾರುಣ ಸಾವು ಮತ್ತು ಇದ್ದು ಇಲ್ಲದಂತೆ ದೂರವಿರುವ ಮಗ ಶಂಭುವಿನ ಚಿಂತೆ.
ಮಗನಿಲ್ಲದ ಚಿಂತೆ ಮನವನ್ನು ಸುಡುತ್ತಿದ್ದರೂ ?? ನಾಥನಾಗಿರುವ ನಾರಾಯಣನನ್ನು ಕರೆಸಿ ಕಾಟುಮೂಲೆಯನ್ನು ?? ವನ ಭೋಗ್ಯಕ್ಕೆ ಬಿಟ್ಟು ಸ್ವತ: ತನ್ನ ಮಗ ಶಂಭುವಿಗಿಂತಲೂ ಹೆಚ್ಚಾಗಿ ?? ವನನ್ನು ನೋಡುವುದು ಗೋಪಾಲಯ್ಯನವರ ಉದಾರತೆಗೆ ಕನ್ನಡಿ ಹಿಡಿಯುತ್ತದೆ. ಮಗ ಬರಲಾರನೆನ್ನುವ ದೃಢವಾದ ನೋವು, ‘ನಮ್ಮ ಸರ್ವ ಭವಿಷ್ಯಕ್ಕೂ - ನಮ್ಮ ಹೆಣ ಹೊರಲಿಕ್ಕೆ ಆಗಲಿ, ಪಿಂಡ ಹಾಕಲಿಕ್ಕೇ ಆಗಲಿ - ನಾರಾಯಣನೇ ಗತಿ; ?? ವನು ?? ಷ್ಟನ್ನು ಮಾಡಿಯಾನು; ಮಾಡಿದರೆ ನಮ್ಮ ಪ್ರೇತಕ್ಕೂ ತೃಪ್ತಿಯಾದೀತು. ಬದಲು ವಂಶದ ಮಗನು ಬಂದು ಶ್ರಾದ್ಧ ಮಾಡಿದರೂ ನನಗೆ ಬೇಕಿಲ್ಲ” ಈ ಮಾತುಗಳ ಮೂಲಕ ?? ವರಿಗೆ ಮಗನು ಬಂದೇ ಬರುವನೆನ್ನುವ ಭರವಸೆಯ ಜೊತೆಗೆ ನಾರಾಯಣನಲ್ಲಿಟ್ಟಿರುವ ?? ವರ ಭರವಸೆಯನ್ನೂ ಎತ್ತಿ ಹಿಡಿಯುತ್ತದೆ.
ನಾರಾಯಣನಿಗಾದರೂ ಮುಂದೆ ಶಂಭುವು ಬಂದರೆ ತಾನು ಉಟ್ಟ ಬಟ್ಟೆಯಲ್ಲಿಯೇ ಇಲ್ಲಿಂದ ಹೊರಟು ಎಲ್ಲಿಗೆ ಹೋಗಬೇಕೆನ್ನುವ ದೂರದರ್ಶಿತ್ವ, ನಿರ್ಗತಿಕತೆ, ನಿರಾಶೆ ಆವರಿಸುವಾಗ ?? ಲ್ಲೇ ಎಲ್ಲಾದರೂ ಜಾಗೆ ಖರೀದಿಸಿ ಕಾಟುಮೂಲೆಯನ್ನು ಬಿಟ್ಟು ಹೋಗುವ ನಿರ್ಧಾರವಿದ್ದರೂ ಮುಂದೆ ಗೋಪಾಲಯ್ಯನವರಿಂದಲೆ ಭರವಸೆಯ ಮಾತುಗಳು ಬಂದಾಗ ?? ವನು ಮೌನಿ.
ಇಲ್ಲಿ ಬೆಟ್ಟವೆಂದರೆ ಬರೀಯ ಕಣ್ಣಿಗೆ ಹಬ್ಬ ತರುವ ಹಸಿರು ಬೆಟ್ಟವಲ್ಲ; ಬದಲಾಗಿ ಹುಲಿ, ಕಪ್ಪು ಚಿತರೆ, ಶಾರ್ದೂಲ, ಕಾಟಿ, ಆನೆ, ಪಾರಂಬೆಕ್ಕು(ಹಾರುವ ?? ಳಿಲು)ಗಳಂತಹ ?? ಪೂರ್ವದ ಪ್ರಾಣಿಗಳು ಮತ್ತು ?? ವುಗಳ ಕ್ರೂರತನದ ?? ನಾವರಣಗಳನ್ನು ತಿಳಿಸುತ್ತದೆ. ?? ವುಗಳ ನಡುವೆಯೂ ಮನುಷ್ಯ ಬದುಕುವ ಮತ್ತು ಭದ್ರತೆಯನ್ನು ನಿರ್ಮಿಸುವ ಹೋರಾಟವನ್ನು ಕೂಡ ಇಲ್ಲಿ ದಾಖಲಿಸಲಾಗಿದೆ. ?? ಲ್ಲದೆ ಸಸ್ಯಪ್ರಬೇಧಗಳು, ಮರಗಿಡಗಳಿರುವಲ್ಲಿ ಕಂಗು, ಮರಗೆಣಸುಗಳಂತಹ ವ್ಯವಹಾರಿಕ ಬೆಳೆಗಳನ್ನು ಬೆಳೆಸಿ ಬದುಕುವ ಛಲ ಮಾದರಿಯಾಗಿಯೂ ಕಾಣುತ್ತದೆ.
ಬೆಟ್ಟದ ಜೀವ ಕಾದಂಬರಿಯಲ್ಲಿ ಗಂಭೀರವಾದ ಸಮಸ್ಯೆಗಳು, ವಿಷಯಗಳು ಕಂಡರೂ ಪಾತ್ರಗಳು ಮಾತ್ರ ನಿರಾಳ. ಗೋಪಾಲಯ್ಯನಂತಹ ಪಾತ್ರವೇ ಗಂಭೀರವಾದ ಸಮಸ್ಯೆಯನ್ನು ಎದುರಿಸುತ್ತಾ ಬಟ್ಯ, ನಾರಾಯಣ, ದೇರಣ್ಣಗೌಡ ಪಾತ್ರಗಳ ಮೂಲಕ ಹಾಸ್ಯವನ್ನು ಮಾಡುತ್ತಾ ಲವಲವಿಕೆಯಿಂದ ಇರುತ್ತದೆ. ಇದಕ್ಕೆ ಉತ್ತಮ ಉದಾಹರಣೆಯಾಗಿ ಶಿವರಾಮನನ್ನು ತಹಶೀಲ್ದಾರನೆಂದು ಪರಿಚಯಿಸುವುದು. ಸ್ವತ: ನಾರಾಯಣನಿಗೂ ಶಿವರಾಮ ತಹಶೀಲ್ದಾರನೇನೋ ?? ನ್ನುವ ?? ನುಮಾನವಾಗುವವರೆಗೂ. ಇದಲ್ಲದೆ ಹುಲಿಗಾಗಿ ಕರ್ಫು ಇಡುವ ಸಂದರ್ಭದಲ್ಲಿ ಹುಲಿಯ ಆಕರ್ಷಣೆಗಾಗಿ ನಾಯಿಯನ್ನು ಒಳಗಿಟ್ಟು ?? ದನ್ನು ವಿವರಿಸುವ ಸನ್ನಿವೇಶವಂತು ನಗೆಯುಕ್ಕಿಸುತ್ತದೆ.
ಬೆಟ್ಟದ ಮೇಲಿನ ಬದುಕು ಎಷ್ಟು ದುಸ್ತರವೆನ್ನುವುದನ್ನು, ‘ನಮ್ಮಲ್ಲಿ ಸಾಯುವುದು ಸುಲಭ; ಹೆಣಸುಡುವುದು ಮತ್ತೂ ಸುಲಭ. ಇಲ್ಲಿ ಬದುಕುವುದೇ ಸ್ವಲ್ಪ ಕಷ್ಟ ನೋಡಿ’ ಈ ವಾಕ್ಯಗಳು ಸಾಬೀತುಪಡಿಸುತ್ತವೆ. ಆದರೂ ಇಂತಹ ಬದುಕನ್ನು ತ್ಯಜಿಸಿ, ಪೇಟೆಯಲ್ಲಿ ಬದುಕುವ ಉತ್ಸಾಹ ಗೋಪಾಲಯ್ಯನವರಿಗಾಗಲಿ, ಶಂಕರಿಯವರಿಗಾಗಲಿ ಇಲ್ಲ. ತಾವು ವಾಸಿಸುತ್ತಿರುವುದು ತಮ್ಮ ಹಿರಿಯರ ಆಸ್ತಿಯನ್ನು. ?? ದನ್ನು ಉಪಭೋಗಿಸುತ್ತಾ ಬದುಕುವುದರಲ್ಲಿಯೂ ಖುಷಿಯನ್ನು ಕಂಡವರು ?? ವರು. ಆ ಆಸ್ತಿಯನ್ನು ಮಾರಾಟ ಮಾಡದೆ ತಮ್ಮ ಮುಂದಿನ ಪೀಳಿಗೆಗೆ ?? ದನ್ನು ಹಸ್ತಾಂತರಿಸುವ ಆಶಯವೂ ?? ವರಿಗಿದೆ.
ಇಲ್ಲಿ ಇನ್ನೊಂದು ಬಹು ಮುಖ್ಯ ?? ಂಶವೆಂದರೆ ಗೋಪಾಲಯ್ಯ ಎಂತಹ ಧೀಮಂತ ವ್ಯಕ್ತಿಯೆಂದರೆ ?? ವರಿಗೆ ಜಾತಿ, ವರ್ಗ, ಲಿಂಗಗಳ ?? ಂತರವಿಲ್ಲದೆ ಬಟ್ಯ, ದೇರಣ್ಣನಂತಹವರ ಜೊತೆಗೆ ಒಳ್ಳೆಯ ಸಂಬಂಧವಿರಿಸಿಕೊಂಡವರು. ತಮ್ಮ ಸ್ವಾರ್ಥವಿದ್ದರೂ ?? ವರಿಗೆ ಬದುಕಿಗೊಂದು ದಾರಿಯನ್ನೂ ಮಾಡಿಕೊಡುತ್ತಾರೆ. ಹಾಗಾಗಿ ಬಟ್ಯ, ನಾರಾಯಣ, ಲಕ್ಷ್ಮೀ, ದೇರಣ್ಣ ಗೌಡರಂತಹ ಪಾತ್ರಗಳಿಗೆ ?? ಸಾಧಾರಣ ವ್ಯಕ್ತಿಯಾಗಿ ಮತ್ತು ದೇವರಂತಹ ಮನುಷ್ಯನಾಗಿ ಗೋಚರಿಸುತ್ತಾರೆ.
ಇಡೀ ಕಾದಂಬರಿ ಬೆಟ್ಟದಂತಹ ಪರಿಸರದಲ್ಲಿ ನಡೆಯುವುದಲ್ಲದೆ ?? ಲ್ಲಿಯ ಕಷ್ಟಕರ ಬದುಕು, ನಗರದಿಂದ ದೂರವೇ ಉಳಿಯುವ ?? ಭಾಗ್ಯ, ಕಾಡುಮೃಗಗಳನ್ನು ಎದುರಿಸುವ ಸಮಸ್ಯೆಯ ಜೊತೆಗೆ ಹೊಂದಾಣಿಕೆ ನಡೆಸುವುದು ಇವೆಲ್ಲಾ ಒಂದು ಹೊಸ ಜಗತ್ತನ್ನೇ ಸೃಷ್ಟಿಸಿಕೊಂಡಂತೆ ಕಾಡುತ್ತದೆ. ದನವನ್ನು ಹಿಡಿದು ತಿನ್ನುವ ಹುಲಿಯ ಶಿಕಾರಿಯಂತು ಕಾದಂಬರಿಯ ಒಂದು ಮುಖ್ಯ ಭಾಗವಾಗಿ ಮೂಡಿಬಂದಿದೆ. ಕೊನೆಗೂ ಹುಲಿಯನ್ನು ಸಾಯಿಸುವಲ್ಲಿ ಯಶಸ್ವಿಯಾಗುವ ಗೋಪಾಲಯ್ಯ ಮಗ ಶಂಭುವನ್ನು ಹುಡುಕಿಕೊಂಡು ಬರುವಲ್ಲಿಯೂ ಯಶಸ್ಸು ಸಾಧಿಸುತ್ತಾರೆನ್ನುವ ಆಶಯದಂತೆ ಕಾದಂಬರಿ ಮುಕ್ತಾಯವನ್ನು ಪಡೆಯುತ್ತದೆ.
ಶಂಭುವಿನ ವಿಚಾರವನ್ನು ಕಾಕತಾಳೀಯವೆಂಬಂತೆ ಹೇಳುವ ಶಿವರಾಮ ಕೊನೆಗೂ ಆತ ಪುಣೆಯಲ್ಲಿ ಕಂಡ ವ್ಯಕ್ತಿಯೆ ಶಂಭುವೆನ್ನುವ ಸತ್ಯ ಸಿನಿಮೀಯವಾಗಿ ಕಂಡರೂ ಕಾದಂಬರಿಯ ?? ಂತ್ಯವನ್ನು ಓದುಗನ ಊಹನೆಗೆ ಬಿಟ್ಟಿರುವುದು ಇಡೀ ಕಾದಂಬರಿಯ ಕುತೂಹಲದ ಘಟ್ಟಕ್ಕೆ ನಾಂದಿಯಾದಿತೇ ಹೊರತು ?? ದೇ ?? ಂತ್ಯವೂ ಆಗಬೇಕಾಗಿಲ್ಲ. ಇಲ್ಲಿ ಗೋಪಾಲಯ್ಯನವರು ಗಾಡಿ ಕಟ್ಟಿಕೊಂಡು ಹೊರಡುವ ಆತುರ ಎಷ್ಟಿದೆಯೆಂದರೆ ‘ಆಗಲೆ ಭಟ್ಟರು ಪುಣೆಯ ತನಕವೂ ಹೋಗಲು ಕಾಲು ಕಿತ್ತಂತೆಯೇ’ ಎನ್ನುವ ಆಶಯದೊಂದಿಗೆ ಕಾದಂಬರಿ ಮುಕ್ತಾಯವಾಗುತ್ತದೆ. ಈ ಆಶಯವೇ ಶಿವರಾಮ ಹೇಳುವ ಪುಣೆಯ ವ್ಯಕ್ತಿಯೆ ಶಂಭುವೆನ್ನುವುದು ನಿಟ್ಟುಸಿರಿಡುವಂತೆ ಮಾಡುತ್ತದೆ.
ಪ್ರಸ್ತುತ ಡಾ|| ಕೆ. ಶಿವರಾಮ ಕಾರಂತರ ‘ಬೆಟ್ಟದ ಜೀವ’ ಶ್ರೀ ಪಿ. ಶೇಷಾದ್ರಿಯವರ ನಿರ್ದೇಶನದಲ್ಲಿ ದತ್ತಣ್ಣ, ಲಕ್ಷ್ಮೀ ಹೆಗಡೆಯಂತಹ ಪ್ರತಿಭೆಗಳಿಂದ ಜೀವ ತುಂಬುತ್ತಿರುವುದು ಚಿತ್ರ ಬಿಡುಗಡೆಯಾಗುವವರೆಗೂ ಕುತೂಹಲ ಮೂಡಿಸಿದೆ. ಇಂತಹ ?? ಪೂರ್ವ ಕೃತಿಯನ್ನು ದೃಶ್ಯಮಾಧ್ಯಮಕ್ಕೆ ತರುತ್ತಿರುವ ಶ್ರೀ ಪಿ. ಶೇಷಾದ್ರಿಯವರಿಗೆ ?? ಭಿನಂದನೆಗಳು.