ಆತ್ಮ ಕಥೆಯಲ್ಲಿ ಮುಚ್ಚು ಮರೆಯಿಲ್ಲದೆ ಎಲ್ಲವನ್ನೂ ಹೇಳಿಕೊಳ್ಳುವುದು ಸರಿಯಾದ ಒಂದು ದೃಷ್ಟಿಕೋನ. ಆತ್ಮಕಥೆಗಳು ಒಂದು ರೀತಿಯ ಮಾದರಿ ಮತ್ತು ಮಾರ್ಗದರ್ಶನ ನೀಡಬಲ್ಲ ಬರಹ ಸಮೂಹವೂ ಆಗಿರಬಹುದು. ಉದಾಹರಣೆಗೆ ‘ನನ್ನ ಆತ್ಮಕಥೆ’ ?? ಥವಾ ‘ಸತ್ಯಾನ್ವೇಷಣೆ’ ಗಾಂಧೀಜಿಯವರ ಆದರ್ಶಗಳನ್ನು ಎತ್ತಿ ತೋರಿಸುವ ಆತ್ಮಕಥನ. ಕೆಲವೊಂದು ವ್ಯತಿರೀಕ್ತಗಳನ್ನು ಯಾವುದೇ ಮುಚ್ಚುಮರೆಯಿಲ್ಲದೆ ಹೇಳಿಕೊಂಡಿರುವುದರಿಂದ ?? ದನ್ನು ‘ಸತ್ಯ’ದ ಶೋಧನೆಯೆಂದರೂ ತಪ್ಪಲ್ಲ. ಕೆ.ಟಿ. ಗಟ್ಟಿಯವರ ‘ತೀರ’ - ಶೈಕ್ಷಣಿಕ ವಿಷಯದ ಶೋಷಿತ ವರ್ಗದ ದನಿಯಾಗಿದೆ. ಶಾಂತರಾಮ ಸೋಮಯಾಜಿಯವರ ‘ಮೇರಿಯ ಕಥೆ’ ಕಾನ್ಸರ್ನ ವಿರುದ್ಧ ಹೋರಾಡಿದ ಹೆಣ್ಣೊಬ್ಬಳ ?? ಸಹಾಯಕ ಕೂಗನ್ನು ಮಾರ್ದನಿಸಿದೆ. ಕಮಲದಾಸ್ ?? ವರ ‘ನನ್ನ ಆತ್ಮಕಥೆ’ಯಲ್ಲಿ ‘ಹೆಣ್ಣು’ ‘ಈ ಶತಮಾನದ ಮಾದರಿ’ ಹೆಣ್ಣು ?? ನ್ನುವುದನ್ನು ತೋರಿಸುತ್ತದೆ.


?? ದೇ ರೀತಿ ಒಬ್ಬ ಸೆಕ್ಸ್ ವರ್ಕರ್ ತನ್ನ ಆತ್ಮಕಥೆಯನ್ನು ಬರೆದರೆ ?? ದರಿಂದ ಸಮಾಜಕ್ಕೆ ಏನು ಸಂದೇಶವಿದೆ ?? ನ್ನುವ ಸಂದೇಹ ಸಹಜ. ಇಲ್ಲಿ ನಳಿನಿ ಜಮೀಲಾ ತಮ್ಮ ‘ಸೆಕ್ಸ್ ವರ್ಕರ್ ಒಬ್ಬಳ ಆತ್ಮಕಥನ’ ದಲ್ಲಿ ಹೋರಾಟಗಾರ್ತಿಯಾಗಿ, ಬಂಡಾಯಗಾರ್ತಿಯಾಗಿ ಮತ್ತು ‘ಕಾಯಕವೇ ಕೈಲಾಸ’ ಎಂದು ವೃತ್ತಿ ಧರ್ಮವನ್ನು ಪಾಲಿಸುವ ಪ್ರಾಮಾಣಿಕ ಹೆಣ್ಣಾಗಿ ಗುರುತಿಸಿಕೊಳ್ಳುತ್ತಾರೆ. ಹೀಗೆ ಸಮಾಜದಿಂದ ಕೀಳಾಗಿ ಕಾಣುವ ವೇಶ್ಯೆಯರ ಬಗ್ಗೆ ಗೆಜ್ಜೆಪೂಜೆ, ಹಗಲುಕನಸು, ಹೂವುಹಣ್ಣು, ಮಸಣದ ಹೂ, ಮುಂತಾದ ಕಾದಂಬರಿಗಳಲ್ಲಿ ಸಮಾಜ ಮುಖಿಯಾದ ಸಮಸ್ಯೆಗಳನ್ನು ಪ್ರತಿಬಿಂಬಿಸಿದರೆ, ತಮಿಳ್ ಸೆಲ್ವಿ ?? ವರು ?? ನುವಾದಿಸಿದ ಹಿಜಡಾಗಳ ಬಗೆ ಬರೆದ ‘ನಾನು ?? ವನಲ್ಲ ?? ವಳು’ ಆತ್ಮಕಥೆಯಲ್ಲಿ ಸಮಾಜದಿಂದ ಶೋಷಿತ ವರ್ಗಕ್ಕೆ ಸರಿದಿರುವ ಹಿಜಡಾಗಳ ಬಗ್ಗೆ ಮತ್ತು ?? ವರು ತಮ್ಮ ಹಕ್ಕುಗಳಿಗಾಗಿ ಹೋರಾಡುವ ಕಥೆಯಿದೆ.


ಆದರೆ ಒಬ್ಬ ಸೆಕ್ಸ್ ವರ್ಕರ್ ತನ್ನ ಆತ್ಮ ಕಥೆಯನ್ನು ಬರೆದರೆ ?? ವಳ ಹೋರಾಟ ಯಾವುದಕ್ಕಾಗಿ? ಕೇವಲ ಹಣಗಳಿಸುವುದಕ್ಕಾಗಿ ಇಂತಹ ಒಂದು ದಾರಿಯನ್ನು ಹುಡುಕಬೇಕಿತ್ತೆ? ಇಲ್ಲಿ ?? ವಳಿಗೆ ?? ನ್ಯಾಯವಾಗಿದೆ; ಶೋಷಣೆಗೆ ಒಳಗಾಗಿದ್ದಾಳೆ ಒಪ್ಪಿಕೊಳ್ಳಬಹುದು. ಲೇಖಕಿಯೇ ಹೇಳಿಕೊಳ್ಳುವಂತೆ ತಾನು ಶ್ರೀಮಂತ ಕುಟುಂಬದ ಹಿನ್ನಲೆಯಿಂದ ಬಂದವಳು, ಲೈಂಗಿಕ ಶೋಷಣೆಯಾಗಿದೆ. ಆದರೆ ?? ದನ್ನು ಮೆಟ್ಟಿ ನಿಲ್ಲುವ ಆತ್ಮ ಸ್ಥೈರ್ಯವನ್ನು ಬಿಟ್ಟು, ?? ದನ್ನೂ ಒಂದು ವೃತ್ತಿಯಾಗಿ ಮುಂದುವರಿಸುವ ?? ನಿವಾರ್ಯತೆ ಇತ್ತೆ? ಎಂಬ ಪ್ರಶ್ನೆ ಎದುರಾಗುತ್ತದೆ.


ಇಲ್ಲಿ ಮೆಚ್ಚಿಕೊಳ್ಳಬೇಕಿರುವುದು ಯಾವುದೇ ?? ಳುಕಿಲ್ಲದೆ ಮುಕ್ತವಾಗಿ ತಾನು ಆ ವೃತ್ತಿಯಲ್ಲಿ ಏನೆಲ್ಲಾ ಸುಖ, ದುಃಖಗಳನ್ನು ?? ನುಭವಿಸಿದೆಯೆನ್ನುವ ಚಿತ್ರಣ. ಆದರೆ ಇದು ಯಾವ ಆದರ್ಶವನ್ನು ತೋರಿಸುತ್ತದೆ. ?? ಂತಹ ವರ್ಗಕ್ಕೆ ಮಾತ್ತು ಆ ದಂಧೆಗೊಳಗಾದವರಿಗೆ ಯಾವ ರೀತಿ ಬದುಕಬೇಕೆನ್ನುವುದನ್ನು ತಿಳಿಸುತ್ತದೆಯೆ? ಒಂದು ಆರೋಗ್ಯ ಮುಖಿಯಾದ ಸಮಾಜಕ್ಕೆ ಇದರಿಂದ ಏನು ಪ್ರಯೋಜನ? ಒಬ್ಬ ಸೆಕ್ಸ್ ವರ್ಕರ್ ಆಗಿದ್ದು ?? ದೇ ಬದುಕಿನ ಸಾಧನೆಯಲಲ್ಲಿ, ?? ದನ್ನು ಮೆಟ್ಟಿ ಏನಾದರೂ ಸಾಧಿಸಿದ್ದರೆ ನಿಜವಾಗಿಯೂ ಇಂತಹ ಆತ್ಮಕಥೆಗಳು ಇನ್ನಷ್ಟು ಬರಲೆಂದು ಸಮಾಜ ನಿರೀಕ್ಷಿಸಬಹುದು.


ಇಂತಹ ಕಾನೂನು ಬಾಹಿರ ವೃತ್ತಿಯಲ್ಲಿ ದೌರ್ಜನ್ಯ ದಬ್ಬಾಳಿಕೆಗಳು ಸಹಜ. ಶೋಷಣೆಗೊಳಗಾದವರನ್ನು ಶೋಷಿಸುತ್ತಲೇ ?? ವರಿಂದ ಪ್ರಯೋಜನ ಪಡೆದುಕೊಂಡು ?? ವರಿಗೆ ವಿರುದ್ಧವಾಗಿ ನಿಲ್ಲುವ ಪ್ರಸಂಗಗಳು ಸರ್ವೇ ಸಾಮಾನ್ಯ. ?? ದರಲ್ಲೂ ಪೊಲೀಸ್ ದೌರ್ಜನ್ಯ ತೀರ ವಿಪರೀತ ಮಟ್ಟದಾಗಿರುತ್ತದೆಯೆನ್ನುವುದನ್ನು ಲೇಖಕಿ ನಿರ್ಭಿಡೆಯಿಂದ ಬರೆದಿದ್ದಾರೆ.


‘ಹೂವು ಹಣ್ಣು’ ಕಾದಂಬರಿಯಲ್ಲಿ ಒಬ್ಬ ತಾಯಿ, ತನ್ನ ಮಗಳು ತನ್ನಂತೆ ಈ ವೃತ್ತಿಗೆ ಇಳಿಯಬಾರದೆನ್ನುವ ತುಡಿವಿರುವಂತೆಯೇ, ಇಲ್ಲಿ ಲೇಖಕಿಗೆ ತನ್ನ ಮಗಳ ಮೇಲಿರುವ ಕಳಕಳಿ ?? ತೀ ಸೂಕ್ಷವಾಗಿದೆ. ‘ತನ್ನ ಮಗಳು ಈ ವೃತ್ತಿ ಬಯಸುವುದಾದರೆ ?? ವಳಿಗೆ ಬಿಟ್ಟ ?? ವಕಾಶ’ ಎಂದು ಹೇಳಿಕೊಂಡರೂ ಇಲ್ಲಿ ?? ವಳನ್ನು ಒಂಟಿಯಾಗಿ ಬಿಟ್ಟು ಹೋಗುವಾಗ ?? ಥವಾ ಇನ್ನೊಬ್ಬರ ಮನೆಯಲ್ಲಿ ಬಿಟ್ಟಿರುವಾಗ ತಾಯಿ ಹೃದಯ ಮಗಳ ಯೋಗ ಕ್ಷೇಮವನ್ನು ಬಯಸುವುದು, ತನ್ನಂತೆ ಮಗಳು ಈ ವೃತ್ತಿಗೆ ಇಳಿಯಬಾರದೆನ್ನುವ ಒಂದು ತುಡಿತದಿಂದಲ್ಲವೆ?

ಮೇಲ್ನೋಟಕ್ಕೆ ನಾವು ‘ಹಾಗೆ ಹೀಗೆ’ ?? ನ್ನುವ ಸ್ಟೇಟ್ಮೆಂಟ್ಗಳನ್ನು ?? ಥವಾ ಹೇಳಿಕೆಗಳನ್ನು ಸುಲಭದಲ್ಲಿ ಹೇಳಿ ಬಿಡಬಹುದು. ಆದರೆ ?? ದನ್ನು ಪಾಲಿಸುವುದು ?? ಷ್ಟೆ ಕಷ್ಟದ ಕೆಲಸ.


ಲೇಖಕಿ ಈಗ ಸಮಾಜದ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡು, ಗುರುತಿಸಿಕೊಳ್ಳುವಷ್ಟರಮಟ್ಟಿಗೆ ಬೆಳೆದಿದ್ದಾರೆ. ಲೈಂಗಿಕ ಕಾರ್ಯಕರ್ತೆಯರ ಬಗ್ಗೆ ಡಾಕ್ಯುಮೆಂಟರಿಗಳನ್ನು ಕೂಡ ತಯಾರಿಸಿದ್ದಾರೆ. ದೇವದಾಸಿಯಂತಹ ಪದ್ಧತಿಯ ವಿರುದ್ಧ ದನಿ ಎತ್ತುವ ಲೇಖಕಿ ಸ್ವತಃ ?? ದೆಷ್ಟೊ ಶೋಷಣೆಗೊಳಗಾದ ಹೆಣ್ಣುಗಳನ್ನು ಗುರುತಿಸಿ ಈ ಪಿಡುಗಿನಿಂದ ಪಾರು ಮಾಡಬಹುದಲ್ಲವೆ? ಸಂಪೂರ್ಣವಾಗಿ ?? ಲ್ಲದಿದ್ದರೂ ಸ್ವಲ್ಪವಾದರೂ ಪ್ರಯತ್ನಿಸಬಹುದಲ್ಲವೆ? ?? ವರ ಬದುಕಿನ ಕಷ್ಟ, ಕೋಟಲೆಗಳನ್ನು ತಿಳಿದಿರುವ ಲೇಖಕಿ ?? ಂತಹ ಒಂದು ಸಾಮಾಜಿಕ ಪಿಡುಗನ್ನು ನಿರ್ಮೂಲನ ಮಾಡುವಂತಹ ಕಾರ್ಯಗಳನ್ನು ಎತ್ತಿಕೊಳ್ಳಬಾರದೇಕೆ? ಈ ಮಾತು ಯಾಕೆಂದರೆ ಇಲ್ಲಿ ?? ದನ್ನೇ ವೃತ್ತಿಯಾಗಿ ಸ್ವ ಇಚ್ಚೆಯಿಂದ ತೊಡಗಿಸಿಕೊಳ್ಳುವರು ವಿರಳ. ಮೋಸ ವಂಚನೆಯಿಂದಲೇ ಇಂತಹ ದಂಧೆಗೆ ಇಳಿಯುವವರು ಹೆಚ್ಚು. ಇದನ್ನು ವ್ಯವಹಾರ ?? ಂದುಕೊಂಡರೂ ಶೋಷಣೆಯಿಂದಲೇ ವೃತ್ತಿಯನ್ನು ಮುಂದುವರಿಸಿಕೊಂಡು ಹೋಗುವ ?? ದೆಷ್ಟು ಮುಗ್ಧ ?? ಮಾಯಕ ಹೆಣ್ಣುಗಳನ್ನೂ ತಾವೇ ಹುಡುಕಿ ‘ಜ್ವಾಲಾಮುಖಿ’ ಯ ಮೂಲಕ ಹೋರಾಟ ನಡೆಸಿ ?? ವರನ್ನು ಮುಕ್ತರಾಗಿಸಬಹುದು. ಯಾರಿಗೆ ಈ ವೃತ್ತಿಯಿಂದ ಹೊರಬರಬೇಕೆನ್ನುವ ಇಚ್ಚೆ ಇದೆಯೊ ?? ವರಿಗೆ ಮಾತ್ರ ಸಹಾಯ ಮಾಡುವ ಬದಲು ಯಾರು ಬಲವಂತವಾಗಿ ವೃತ್ತಿಗೆ ಇಳಿದಿದ್ದಾರೋ ?? ವರನ್ನು ಗುರುತಿಸಿ ಇಂತಹ ದಂಧೆಯಿಂದ ಮುಕ್ತಗೊಳಿಸಬಹುದಲ್ಲವೆ?


ಸಾಮಾಜಿಕ ವ್ಯವಸ್ಥೆಯಾದ ಕೌಟುಂಬಿಕ ಜೀವನವನ್ನು ಆದರ್ಶ ಪ್ರಾಯವೆಂದು ನಂಬಂದ ಲೇಖಕಿ ತನ್ನ ರಕ್ಷಣೆಯನ್ನು ಒಪ್ಪಿಕೊಂಡಿರುವುದು ಮಗುವಿನ ತಾಯಿಯಾದಾಗ. ಈ ಆಸರೆ ಪಡೆದಿದ್ದು ಒಬ್ಬ ‘ಗಂಡ’ ?? ನ್ನುವ ವ್ಯಕ್ತಿಯಿಂದ. ಗಂಡ, ಮಗು ಮತ್ತು ಆಸರೆ ಕೌಟುಂಬಿಕ ಜೀವನದ ಆದರ್ಶಗಳಲ್ಲವೆ? ಇಂತಹ ?? ನೇಕ ವ್ಯತಿರೀಕ್ತಗಳು ಮತ್ತು ?? ಪೂರ್ಣ ವಿಷಯಗಳಿಂದ ಲೇಖಕಿ ಏನನ್ನು ಹೇಳ ಹೊರಟಿದ್ದಾರೆ ?? ನ್ನುವುದು ತಿಳಿಯುವುದಿಲ್ಲ.


ಲೈಂಗಿಕ ದುಡಿಮೆಗೂ ಸುಖ, ಸಂತೋಷಗಳ ಸೌಂದರ್ಯದ ಉತ್ಪಾದನೆಗೂ ಸಂಬಂಧ ಕಲ್ಪಸುವ ಲೇಖಕಿ ಲೈಂಗಿಕ ಕೆಲಸವನ್ನು ‘ಆಪ್ತ ಸಲಹೆ’ ಮತ್ತು ‘ಚಿಕಿತ್ಸೆ’ ಗಳಿಗೆ ಪ್ರತಿಪಾದಿಸಿರುವುದನ್ನು ಹೊಸ ದೃಷ್ಟಿಯಿಂದ ಯೋಚಿಸಬೇಕಾಗಿದೆ.


ಒಬ್ಬ ಲೈಂಗಿಕ ಸೇವಕಿಯಾಗಿ, ಒಬ್ಬ ಮಗಳಾಗಿ, ತಾಯಿಯಾಗಿ, ಪತ್ನಿಯಾಗಿ ಹೋರಾಟದ ಹಾದಿ ಹಿಡಿದು ‘ಆತ್ಮ ಕಥೆ’ಯನ್ನು ಬರೆದಿರುವುದು, ಸಮಾಜದ ಇನ್ನೊಂದು ಪಾರ್ಶ್ವದಲ್ಲಿ ನಡೆಯುವ ದಾರುಣವಾದ ವಾಸ್ತವಿಕತೆಯನ್ನು ತೆರೆದಿಡುತ್ತದೆ. ಈ ಕೃತಿಯನ್ನು ಕೆ. ನಾರಾಯಣಸ್ವಾಮಿ ?? ವರು ಕನ್ನಡಕ್ಕೆ ?? ನುವಾದಿಸಿದ್ದಾರೆ. ಇದನ್ನು ಸೃಷ್ಟಿ ಪಬ್ಲಿಕೇಶನ್, ವಿಜಯನಗರ, ಬೆಂಗಳೂರು ಇವರು ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ. ಇದರ ಬೆಲೆ ರೂ. ೧೫೦/- ಮಾತ್ರ.