ನನಗಾಗ ಶಾಲೆಯ ಮೆಟ್ಟಿಲು ಹತ್ತುವ ವಯಸ್ಸು. ನಮ್ಮದು ಕುಗ್ರಾಮವೆಂದರೆ ಕುಗ್ರಾಮ. ಆದರೆ ಹಸಿರು ವನರಾಶಿಯಿಂದ ಸದಾ ಕಂಗೊಳಿಸುವ ಸೌಂದರ್ಯವಂತೆ ಆ ಊರು. ಆಗಿನ್ನೂ ಸಂಪರ್ಕ ಸಾಧನಗಳಾವುದು ಇರಲಿಲ್ಲವಾಗಿ ಜನರಿಗೆ ಕಾಲ್ನಡಿಗೆಯೆ ಗತಿ. ಊರು ?? ನ್ನುವುದಕ್ಕೆ ಒಂದು ರಸ್ತೆ, ನೆಪಮಾತ್ರಕ್ಕೆ! ಹೊಂಡ, ಕಲ್ಲುಗಳ ಪಾದಾಚಾರಿಗೂ ನಡೆಯುವುದಕ್ಕೂ ಕಷ್ಟವಾದ ದಾರಿ ?? ದು. ಆ ದಾರಿಯಲ್ಲಿ ಶ್ರೀ ಮಂಜುನಾಥ ಮೋಟಾರ್ ಸರ್ವೀಸ್ (smms) ಕಂಪನಿಯ ಉದ್ದ ಮೂತಿಯ ಒಂದೇ ಒಂದು ಬಸ್ಸು ಬಂದರೆ ಬಂತು ಇಲ್ಲದಿದ್ದರೆ ಇಲ್ಲ. ಹಾಗಂತ ಯಾರೂ ಆ ಬಸ್ಸಿಗೆ ಕಾಯುವುದು ಇಲ್ಲ. ಬಸ್ಸು ಬಂದರೆ ಉಡುಪಿಗೋ ಶಿರ್ವಕ್ಕೊ ಹೋದಾರು. ಆಗಿನ ಕಾಲಕ್ಕೆ ?? ದರ ?? ನಿವಾರ್ಯತೆ ಇರಲಿಲ್ಲ ?? ನ್ನುವಷ್ಟರ ಮಟ್ಟಿಗೆ.
?? ಂತಹ ನಮ್ಮ ಕಾಡುಗುಡ್ಡ ಹಳ್ಳಿಗೆ ಒಂದು ದಿನ ವಿಚಿತ್ರ ವಾಹನದಲ್ಲಿ ಸಿಟಿಯ ಜನರ ದಿಂಡು ಬಂದು ಬಿಟ್ಟಿತು. ನಮಗೆಲ್ಲಾ ಆಶ್ಚರ್ಯ. ?? ವರ ವೇಷಭೂಷಣ, ಸ್ಟೈಲು, ಮಾತುಕತೆ ಎಲ್ಲಾ ಎಲ್ಲಾ ವಿಚಿತ್ರ ?? ನಿಸಿಬಿಟ್ಟಿತು."
ಊರಿಗೆ ಏನಾದರೊಂದು ಹೊಸ ವಾಹನ ಬಂದ್ರೆ ?? ದು ಮಕ್ಕಳನ್ನು ಕದ್ದೊಯ್ಯುವ ‘ಕಳ್ಳರ ವಾಹನ’ ?? ಂತಲೆ ಊರವರ ?? ಭಿಪ್ರಾಯ. ಊರಿನ ಪ್ರಮುಖರು ಬಂದ ವಾಹನವನ್ನು ನಿಲ್ಲಿಸಿ, ವಿಚಾರಿಸಿ ವ್ಯಕ್ತಿಗಳ ಬಗೆ ತಿಳಿದುಕೊಂಡ ಬಳಿಕವೆ, ‘ಇಂತವರು ಊರಿಗೆ ಬಂದಿದ್ರು’ ?? ನ್ನುವ ಗಾಬು ಊರಿಗೆ ಹರಡುತ್ತಿತ್ತು.
ಹಳ್ಳಿಯಲ್ಲಿ ಮನೆಗಳೆಂದರೆ ಎರಡು ಮೂರು ಫರ್ಲಾಂಗ್ಗಳಿಗೆ ಒಂದು ಮನೆ. ತೊಡಮೆ, ತೋಡು, ಕಾಲುಸಂಕ, ವಳಚ್ಚಿಲ್, ಗುಡ್ಡ, ಕಾಡುಗಳನ್ನು ದಾಟಿ ಮನೆಯನ್ನು ತಲುಪಬೇಕಾದ ಪರಿಸ್ಥಿತಿ. ಕಾಲು ದಾರಿ ಬಿಟ್ಟರೆ ಊರಿಗೆ ರಸ್ತೆಯೆಂದರೆ ಸುಭಾಸ್ನಗರದಿಂದ ಬಂಟಕಲ್ ಕ್ರಾಸ್ ರೋಡ್ವರೆಗಿನ ಒಂದು ಮಣ್ಣಿನ ರಸ್ತೆಯಷ್ಟೆ. ಊರಿನವರಿಗೆ ?? ಭಿವೃದ್ಧಿ ಬೇಕಾಗಿಲ್ಲ. ?? ಭಿವೃದ್ಧಿಯೆಂದರೆ ?? ದು ?? ಪಾಯಗಳಿಗೆ ಆಹ್ವಾನವೆಂದೆ ತಿಳಿದಿದ್ದರು ?? ನ್ಸುತ್ತೆ. ?? ದಕ್ಕಾಗಿ ರಸ್ತೆಯಾಗಲಿ, ಸರಿಯಾದ ದಾರಿಯನ್ನಾಗಲಿ ಮಾಡುವುದಕ್ಕೆ ಯಾರೂ ಮುಂದೆ ಬರುತ್ತಿರಲಿಲ್ಲ. ?? ವರ ಜಾಗೆಯನ್ನೂ ಬಿಟ್ಟು ಕೊಡುತ್ತಿರಲಿಲ್ಲ. ಇವತ್ತಿನ ಹಾಗೆ ಪಂಚಾಯತುಗಳು ಆಗಿನ್ನೂ ಬೆಳೆದಿರಲಿಲ್ಲ. ಇದ್ದರೂ ?? ಭಿವೃದ್ಧಿಗೆ ?? ವಕಾಶವನ್ನು ನೀಡುತ್ತಿರಲಿಲ್ಲ.
?? ಂತಹ ನಮ್ಮ ಹಳ್ಳಿಗೆ ಇನ್ನೊಂದು ಹೆಸರು ಬೊಲ್ಲೆ (ಬೆಳ್ಳೆ ಹೆಸರಿನ ತುಳು ಉಚ್ಛಾರ). ಊರಿನ ಪೂರ್ವದಿಂದ ಉತ್ತರ ದಿಕ್ಕಿನವರೆಗೂ ಪಾಪನಾಶಿನಿ ನದಿ ಹರಿಯುವುದರಿಂದ ಕೃಷಿ ಪ್ರಧಾನವಾದ ಊರು ನಮ್ಮದು. ಭತ್ತದ ಬೆಳೆ ಮತ್ತು ತೆಂಗಿನಬೆಳೆಗಳನ್ನು ಬಿಟ್ಟರೆ ಉಳಿದಂತೆ ಸೊಪ್ಪು ತರಕಾರಿಯನ್ನು ಬೆಳೆಯುವುದು ಸರ್ವೇ ಸಾಮಾನ್ಯ. ಆ ನದಿಯ ಹತ್ತಿರದಲ್ಲಿ ?? ಂದರೆ ಉತ್ತರ ದಿಕ್ಕಿಗೆ ಬೊಲ್ಲೆದಂಗಡಿ. ?? ದು ಊರಿನ ಒಂದೇ ಒಂದು ಗೌಡ ಸಾರಸ್ವತ ಬ್ರಾಹ್ಮಣರ ಮನೆ. ದಿನಸಿ ಸಾಮಾನಿಗೆ ಮಾತ್ರವಲ್ಲ ಮೊದಲು ?? ಕ್ಕಿ ಮಿಲ್ಲು ಬಂದಂದು ?? ಲ್ಲಿಯೆ. ಹಾಗಾಗಿ ?? ದು ಒಂದು ಮೂಲೆಯಲ್ಲಿದ್ದರೂ ಜನರಿಗೆ ?? ದನ್ನು ಹುಡುಕಿಕೊಂಡು ಹೋಗುವ ?? ನಿವಾರ್ಯತೆ. ?? ಲ್ಲಿ ಭತ್ತದ ಕೃಷಿ ಮತ್ತು ಕಬ್ಬನ್ನು ಬೆಳೆಯುವುದು ಗೊತ್ತಿತ್ತು.
ಬ್ರಹ್ಮಾವರದ ಕಬ್ಬಿನ ಕಾರ್ಖಾನೆ ಪ್ರಾರಂಭವಾಗುವವರೆಗೂ ?? ಲ್ಲಿ ಆಲೆಮನೆಯಿತ್ತು. ಊರಿನ ಸೆಲ್ಫ್ ಮೆಕ್ಯಾನಿಕ್ ಎಂದೇ ಖ್ಯಾತರಾದ ಸೀನಪ್ಪ ಭಟ್ಟರು ಆಲೆಮನೆಯ ರೂವಾರಿ. ಕಬ್ಬು ಮಾಗುವ ಸಮಯಕ್ಕೆ ?? ವರು ದೊಡ್ಡ ಕೊಪ್ಪರಿಗೆ ಮತ್ತು ಡಿಸೆಲ್ ಪಂಪ್ ತಂದು ಕಬ್ಬನ್ನು ಕ್ರಶ್ ಮಾಡಿ ?? ದರ ಹಾಲನ್ನು ಕೊಪ್ಪರಿಗೆಗೆ ಸುರಿದು ಬೆಲ್ಲ ತಯಾರಿಸುವುದು ಈಗಲೂ ನಮಗೆ ನೆನಪಿದೆ. ಎರಡು ಮೂರು ದಿನಗಳವರೆಗೂ ಕೊಪ್ಪರಿಗೆಯಲ್ಲಿ ಕಬ್ಬಿನ ಹಾಲು ಕೊತ ಕೊತಾಂತ ಕುದಿಯುವುದು ಗೊತ್ತು. ನಾವು ಮಧ್ಯಾಹ್ನದ ಹೊತ್ತಿಗೆ ಶಾಲೆಯಲ್ಲಿ ಬುತ್ತಿ ಊಟ ಮುಗಿಸಿ ಬೆಲ್ಲದ ಆಸೆಗಾಗಿ ?? ಲ್ಲಿಗೆ ಓಡುವುದಿತ್ತು. ಬಿಸಿ ಬಿಸಿ ಬೆಲ್ಲವನ್ನು ದೊಡ್ಡ ಎಲೆಗೆ ಹಾಕಿ ?? ವರು ನಮಗೆ ಕೊಟ್ಟು, ‘ಎಲ್ಲರೂ ಹಂಚಿ ತಿನ್ನಿ ?? ನ್ನೋರು’.
?? ಂತಹ ?? ಲೆಮನೆಯಿರುವ ಮನೆಗೆ ಪರವೂರಿನಿಂದ ಬಂದ ನಾಲ್ಕೈದು ವಾಹನಗಳು ಹೋದದ್ದು ನಮಗೆ ತಿಳಿಯಿತು. ಊರಿಗೆ ವಾಹನ ಬಂದರೆ ಕೇಳಬೇಕೆ? ಒಬ್ಬರ ಕಿವಿಯಿಂದ ಒಬ್ಬರಿಗೆ ವಿಷಯ ತಲುಪಿತು. ಹೆಂಗಸರು ಮಕ್ಕಳು ಮುದುಕರೆನ್ನದೆ ?? ಲ್ಲಿಗೆ ಹೊರಟರೆ ?? ಲ್ಲಿ ಊರೆ ಜಾತ್ರೆ ಸೇರಿದಂತೆ ಕಾಣುತ್ತಿತ್ತು.
ನಮಗೂ ಕುತೂಹಲ; ?? ವರಂತೆ, ಇವರಂತೆ ?? ನ್ನುವ ಗಾಬು. ?? ಕ್ಕ, ?? ಣ್ಣನ ಜೊತೆಗೆ ನಾವು ಹೋದೆವು. ?? ರ್ಧ ದಾರಿಯಲ್ಲಿ ?? ಮ್ಮ ನಮ್ಮನ್ನು ಗದರಿಸಿ ಹೋಗದಂತೆ ತಡೆದರು. ಹಾಗೂ ಹೀಗೂ ?? ಣ್ಣನವರೆಲ್ಲಾ ?? ಮ್ಮನ ಕಣ್ಣು ತಪ್ಪಿಸಿಕೊಂಡು ಓಡಿದರು.
“?? ಲ್ಲಿ ಆಗ್ತಾ ಇರೋದು ಸಿನಿಮಾ ಶೂಟಿಂಗ್. ?? ದನ್ನೆಲ್ಲಾ ಏನು ನೋಡುವುದು ನೀವು ಸಣ್ಣ ಮಕ್ಕಳು, ಸುಮ್ನೆ ಮನೆಗೆ ಬರ್ತೀರಾ ಇಲ್ವಾ?” ?? ಂದ್ರು. ಆಗ ?? ವರ ಮಾತನ್ನು ಮೀರಿ ನಡೆಯುವ ಧೈರ್ಯವಿರಲಿಲ್ಲ. ಮನೆಗೆ ವಾಪಾಸಾದೆವು. ಆದರೆ ನಮ್ಮ ನೆರೆಮನೆಯ ಹುಡುಗ ಹುಡುಗಿಯರೆಲ್ಲಾ ಹೋದವರ ಬಾಯಿಯಲ್ಲಿ ಡಾ. ರಾಜಕುಮಾರ್ ಮತ್ತು ಜಯಮಾಲರ ಬಗ್ಗೆ ಮಾತುಗಳು.
ಕೊನೆಗೆ ನನ್ನ ಎರಡನೆ ?? ಣ್ಣ ಹೈಸ್ಕೂಲ್ ಓದುತ್ತಿದ್ದ ?? ವನು ರಾತ್ರಿ ಮನೆಗೆ ಬಂದವನೆ ಎಲ್ಲವನ್ನೂ ನಮಗೆ ವರದಿ ಒಪ್ಪಿಸಿದ. ಶೂಟಿಂಗ್ ನೋಡದಿದ್ದರು ಆ ಸನ್ನಿವೇಶವನ್ನು ಚಿತ್ರಿಸಿಕೊಂಡೆವು.
ಬೊಲ್ಲೆದಂಗಡಿಯ ಸುತ್ತಮುತ್ತ ಬೈಲು ಗದ್ದೆಯಾಗಿರುವುದರಿಂದ ಭತ್ತದ ಪಚ್ಚ ಪೈರಿನ ತೋರಣ ಮತ್ತೊಂದೆಡೆ ಕಬ್ಬಿನ ತೋಟ. ?? ಷ್ಟಿದ್ದರೆ ಕೇಳಬೇಕೆ? ಎಂತಹ ಸಿನಿಮಾ ಮಂದಿಯೂ ಆ ದೃಶ್ಯಕ್ಕೆ ಮಾರುಹೋಗದಿರಲಾರರು.
?? ಂತಹ ಪ್ರಕೃತಿಯ ನಡುವೆ ‘ಕೂಡಿ ಬಾಳೋಣ ಎಂದೆಂದೂ ಸೇರಿ ದುಡಿಯೋಣ’ ?? ನ್ನುವ ಯುಗಳ ಗೀತೆಯ ಚಿತ್ರೀಕರಣ. ಪಾಪನಾಶಿನಿ ನದಿಯ ‘ಕರಿಯದ ಬಾಕಿಲ್’ ನಿಂದ ಉದ್ದನೆಯ ಎತ್ತರದ ಕಟ್ಟಪುಣಿಯ ಇಕ್ಕೆಲಗಳಲ್ಲಿ ಭತ್ತದ ಹಸಿರು ?? ಲ್ಲಿಂದ ಮುಂದುವರೆದು ದೊಡ್ಡ ಗೊಬ್ಬರದ ಗುಂಡಿಯಿರುವ ಗದ್ದೆಯವರೆಗೂ ಚಿತ್ರೀಕರಣ. ಸಾದಾರಣವಾಗಿ ಆ ಹಾಡಿನ ಕೊನೆಯ ?? ರ್ಧ ಭಾಗ ಚಿತ್ರೀಕರಣವಾಗಿರುವುದು ನಮ್ಮೂರಿನಲ್ಲೆ.
ಚಿತ್ರೀಕರಣವೆಂದರೆ ಕನಿಷ್ಟಪಕ್ಷ ಒಂದೆರಡು ದಿನವಾದರೂ ಇರುತ್ತಾರೆಂದು ತಿಳಿದಿದ್ದ ನಮಗೆ ನಿರಾಶೆ. ಮರುದಿನ ಹೇಗೂ ?? ಮ್ಮನನ್ನು ಒಪ್ಪಿಸಿ ನಾವು ?? ಲ್ಲಿಗೆ ಹೋದರೆ ?? ಲ್ಲಿ ಮೂಕ ಸಾಕ್ಷಿಯಂತೆ ನಿಂತಿದ್ದು ಬರೀ ಹಸಿರು ಭತ್ತದ ಪೈರಿನ ಗದ್ದೆಗಳು, ಪಾಪನಾಶಿನಿ ನದಿ, ದೊಡ್ಡ ಕಟ್ಟಪುಣಿ, ತೆಂಗಿನ ಮರದ ಸಾಲುಗಳು, ದೇವಸ್ಥಾನದ ಪ್ರಾಂಗಣ, ನಗಾರಿ ಕೋಣೆ, ನೀಲಗಿರಿ ಮರಗಳು... ?? ಣ್ಣ ಮತ್ತು ?? ವನ ಫ್ರೆಂಡ್ಸೆಲ್ಲಾ ಸೇರಿ, ‘ಓ ಇಲ್ಲಿಂದ ಜಯಮಾಲ ನೃತ್ಯ ಮಾಡ್ತಾ ಬರ್ತಾ ಇದ್ರು. ?? ಣ್ಣಾವ್ರು ಆ ಕಡೆಯಿಂದ ಬರ್ತಾ ಇದ್ರು. ?? ಲ್ಲಿಯೆ ಭತ್ತದ ತೆನೆಗಳನ್ನು ಕಲಶೆಯ ನಡುವೆ ಇಟ್ಟು ನೃತ್ಯ ಮಾಡ್ತಾ ಇದ್ದಿದ್ದು, ಇಲ್ಲಿ ಮೇಲಿನಿಂದ ಕೆಳಗೆ ಇಳಿಯುವ ಮೆಟ್ಟಿಲುಗಳ ದೃಶ್ಯ ತೆಗೆದದ್ದು. ?? ಲ್ಲಿ ?? ವರೆಲ್ಲಾ ಮೇಕಪ್ ಮಾಡ್ತಾ ಇದ್ರು. ಇಲ್ಲಿ ನಾವೆಲ್ಲಾ ನಿಂತು ನೋಡ್ತಾ ಇದ್ದೆವು. ಕ್ಯಾಮರಾ ನಿಧಾನಕ್ಕೆ ನಮ್ಮತ್ತ ತಿರುಗಿದ್ದು. ಪಿಕ್ಚರ್ ರಿಲೀಸ್ ಆದ ಕೂಡ್ಲೆ ನಾನು ಮೊದಲು ನೋಡ್ಬೇಕು. ನಮ್ಮ ಊರಿನ ಯಾರ್ಯಾರೆಲ್ಲಾ ?? ದರೊಳಗೆ ಇದ್ದಾರೆಂತ ಕಾಣ್ಬೇಕು’ ?? ಂತ ಉದ್ದಕ್ಕೆ ಹೇಳುತ್ತಿದ್ದರೆ ನಮಗೆ ಎಂತದೋ ಪುಳಕ.
ದೊರೆ-ಭಗವಾನ್ ನಿರ್ಧೇಶನದ ‘ಗಿರಿಕನ್ಯೆ’ಯ ಆ ಹಾಡು ಇಂದಿಗೂ ಜನಪ್ರಿಯ. ನಮ್ಮ ಮಣ್ಣಿನ, ಊರಿನ ದೃಶ್ಯಗಳನ್ನು ಸೆರೆ ಹಿಡಿಯುತ್ತಾ ಸಾಗಿದ್ದ ಹಾಡಿನ ಸಾಲುಗಳನ್ನು ಕೇಳುವಾಗ ?? ಲ್ಲಿಯ ದೃಶ್ಯಗಳದ್ದೇ ಕಾರುಬಾರು ಕಣ್ಣುಗಳಲ್ಲಿ.
ನೆಲವ ನಂಬಿ ಬಾಳೋರು ನಾವುಗಳೆಲ್ಲಾ
ಮಳೆಯ ನಂಬಿ ಬದುಕೋರು ಇಲ್ಲಿ ಎಲ್ಲಾ
ಹಸಿರೆ ಉಸಿರು ನಮಗೆಲ್ಲಾ
ಮೆರೆವ ಜನರ ಭೂತಾಯಿ ಮೆಚ್ಚುವುದಿಲ್ಲ
ದುಡಿವ ಜನರ ಈ ತಾಯಿ ಮರೆಯುವುದಿಲ್ಲ
ಮಣ್ಣೆ ಹೊನ್ನು ನಮಗೆಲ್ಲಾ
ದುಡಿಮೆಗೆ ಫಲವ ಕಂಡೇ ಕಾಣುವೆ
ಬೆವರಿಗೆ ಬೆಲೆಯನು ನೀ ಪಡೆವೆ
ಎಂತಹ ?? ದ್ಭುತವಾದ ಹಾಡು! ?? ದಕ್ಕೆ ಪೂರಕವಾದ ಪಚ್ಚ ಪೈರಿನ ಗದ್ದೆಗಳು. ಸಮುದ್ರ ಮಟ್ಟಕ್ಕಿಂತಲೂ ಎತ್ತರದಲ್ಲಿರುವ ಕುಂಜಾರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ. ?? ಲ್ಲಿಂದ ನಿಂತು ಸುತ್ತಾ ನೋಡಿದರೆ ಪೂರ್ವದಲ್ಲಿ ಕುದುರೆಮುಖದ ಬೆಟ್ಟದ ಸಾಲುಗಳು, ಪಶ್ಚಿಮದಲ್ಲಿ ಸುರತ್ಕಲ್ನ ದೀಪಸ್ತಂಭದವರೆಗೂ ಕಾಣುವ ಸಮುದ್ರ, ಉತ್ತರಕ್ಕೆ ಮಣಿಪಾಲ, ದಕ್ಷಿಣಕ್ಕೆ ಹಸಿರು ತುಂಬಿದ ಬೆಟ್ಟಗಳು. ಒಂದೊಂದೆ ದೃಶ್ಯಗಳು ಪರದೆಯ ಮೇಲೆ ಮೂಡಿ ಬರುವಾಗ ಇದು ನನ್ನೂರು, ಇದು ದೇವಸ್ಥಾನದ ಮುಂಭಾಗ, ಇದು ನಗಾರಿ ಕೋಣೆ, ದೇವಸ್ಥಾನದ ಎದುರಿನ ಮೆಟ್ಟಿಲುಗಳು. ಹೀಗೆ ಈಗಲೂ ಆ ಹಾಡು ಬರುವಾಗ ನಾವು ಹೇಳುವುದುಂಟು ಹಳೆಯ ನೆನಪುಗಳನ್ನು ಕೆದಕುತ್ತಾ...
1977 ರಲ್ಲಿ ಚಿತ್ರ ಬಿಡುಗಡೆ ಕಂಡಿತು. ಆಗ ಚಿಕ್ಕಮಕ್ಕಳಿಗೆ ಸಿನಿಮಾ ಥಿಯೇಟರಿಗೆ ಹೋಗಿ ಸಿನಿಮಾ ನೋಡುವುದಕ್ಕೆ ಮನೆಯಲ್ಲಿ ?? ವಕಾಶವಿರಲಿಲ್ಲ. ಸುಮಾರು ಮೂವತ್ತು ವರ್ಷಗಳ ಬಳಿಕ ಆ ಚಿತ್ರವನ್ನು ನೋಡುವ ?? ವಕಾಶ ಸಿಕ್ಕಿತು. ಆ ನೆನಪುಗಳು ನನ್ನನ್ನು ಇಲ್ಲಿ ಬಿಚ್ಚಿಡಲು ?? ನುವು ಮಾಡಿಕೊಟ್ಟಿದೆ.
ಡಾ. ರಾಜ್ಕುಮಾರ್ ನಮ್ಮ ಊರಿಗೆ ಬಂದಿದ್ರು. ಡಾ. ಜಯಮಾಲ ಬಂದಿದ್ರು. ನೆನೆಸಿಕೊಂಡ್ರೆ ಈಗ್ಲೂ ಖುಷಿಯಾಗುತ್ತೆ. ಕೇವಲ ಸಿನಿಮಾ ಮಂದಿಯನ್ನು ಹೆಚ್ಚಾಗಿ ಈಗಲೂ ಟಿವಿ. ಸಿನೆಮಾಗಳಲ್ಲಿ ಮಾತ್ರ ನೋಡಿರ್ತೀವಿ. ?? ವರನ್ನು ನೇರವಾಗಿ ನೋಡುವುದಕ್ಕೂ ದೃಶ್ಯಗಳಲ್ಲಿ ನೋಡುವುದಕ್ಕೂ ವ್ಯತ್ಯಾಸವಿರುತ್ತೆ, ?? ಲ್ವಾ...?
ಚಿತ್ರ ಕೃಪೆ: ಈಕನಸು.ಕಾಂ